ಸಿನಿಮಾ ಸುದ್ದಿ

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮಾಹಿತಿ ಪ್ರಸಾರ ಸಚಿವಾಲಯ ಕಾರ್ಯವೈಖರಿಗೆ ರಾಷ್ಟ್ರಪತಿ ಅಸಮಾಧಾನ

Raghavendra Adiga
ನವದೆಹಲಿ: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭವ್ಚನ್ನು ವಿವಾದಕ್ಕೀಡಾದ ಕುರಿತಂತೆ ರಾಷ್ಟ್ರಪತಿ ಭವನ ಪ್ರಧಾನಮಂತ್ರಿ ಕಛೇರಿಗೆ ತನ್ನ ಅಸಮಾಧಾನವನ್ನು ತಿಳಿಸಿದೆ.
ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತಪ್ಪು ನಿರ್ಧಾರ ತೆಗೆದುಕೊಂಡಿದೆ ಎಂದು ಪೂರ್ಣ ಘಟನೆಯ ಕುರಿತಂತೆ ತಿಳಿದಿದ್ದ ಎರಡು ಹಿರಿಯ ಸರ್ಕಾರಿ ಅಧಿಕಾರಿಗಳು ಹೇಳಿದ್ದಾರೆ.
ಗುರುವಾರ ನಡೆದ 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ರಾಷ್ಟ್ರಪತಿಗಳ ಗೈರನ್ನು ವಿರೋಧಿಸಿ ಐವತ್ತಕ್ಕೂ ಹೆಚ್ಚು ಪ್ರಶಸ್ತಿ ಪುರಸ್ಕೃತರು ಪ್ರತಿಭಟನೆ ನಡೆಸಿದ್ದರು. ಇದರ ನಡುವೆಯೇ ಕೇವಲ 11 ಮಂದಿಯಷ್ಟೇ ಗೌರವ ಪುರಸ್ಕಾರವನ್ನು ಪಡೆದಿದ್ದಾರೆ.
ಮಾಹಿತಿ ಮತ್ತು ಪ್ರಸಾರ ಸಚಿವಾಲಯ  ಶಿಷ್ಟಾಚಾರ ಬದಲಾವಣೆ ವಿಚಾರವನ್ನು ಕಡೆ ಕ್ಷಣದಲ್ಲಿ ರಾಷ್ಟ್ರಪತಿ ಭವನಕ್ಕೆ ತಿಳಿಸಿದೆ. ಇದರಿಂದ ರಾಷ್ಟ್ರಪತಿಗಳು ಅಚ್ಚರಿಗಿಒಂಡಿದ್ದಾರೆಈ ವಿಚಾರವನ್ನು ಪ್ರಧಾನಿಗಳ ಕಛೇರಿಗೆ ಮನವರಿಕೆ ಮಾಡಲಾಗಿದೆ ಎಂದು ಓರ್ವ ಅಧಿಕಾರಿ ಹೇಳಿದ್ದಾರೆ.
ಗಣರಾಜ್ಯೋತ್ಸವದಂತಹಾ ಅತ್ಯಂತ ಪ್ರಮುಖ ಕಾರ್ಯಕ್ರಮಗಳ ಹೊರತಾಗಿ ರಾಷ್ಟ್ರಪತಿ ಕೋವಿಂದ್ ಪ್ರತಿ ಕಾರ್ಯಕ್ರಮದಲ್ಲಿ ಒಂದು ಗಂಟೆಯಷ್ಟು ಕಾಲ ಮಾತ್ರ ಭಾಗವಹಿಸುತ್ತಾರೆ. ಅವರು ರಾಷ್ಟ್ರಪತಿಗಳಾಗಿ ಅಧಿಕಾರ ಸ್ವೀಕರಿಸ್ದ ದಿನದಿಂದಲೂ ಇದ್ ಪರಿಪಾಠವಿದೆ. ಹಾಗೆಯೇ ರಾಷ್ಟ್ರಪತಿಗಳು ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಒಂದು ಗಂಟೆ ಕಾಲ ಆಗಮಿಸುವುದಾಗಿ ಹೇಳಿದ್ದರು ಎಂದು ರಾಷ್ಟ್ರಪತಿ ಭವನ ವಕ್ತಾರರೊಬ್ಬರು ಹೇಳಿದ್ದಾರೆ.
SCROLL FOR NEXT